ಹೈದರಾಬಾದ ಕರ್ನಾಟಕದ ಕೆಲವು ಹಳ್ಳಿಗಳು ಇನ್ನು ರಸ್ತೆಯನ್ನೇ ಕಂಡಿಲ್ಲ ಎಂದರೆ ನೀವು ನಂಬಲೇ ಬೇಕು. ಇದಕ್ಕೆಲ್ಲ ಕಾರಣ ಸರಕಾರ ಮತ್ತು ಜನಪ್ರತಿನಿಧಿಗಳು... ಏನು, ಎತ್ತ, ಇದರ ಸುತ್ತ ಒಂದು ಚಿತ್ತ ಇಲ್ಲಿದೆ.
ಮಹತ್ವಾಕಾಂಕ್ಷೆಯ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಸಜ್ಜಾಗಿದೆ. ಆದರೆ, ಹಿಂದಿನ ಬಜೆಟಗಳಂತೆ ಇದು ಕೂಡ ಭರವಸೆಗಳ ಗಾಳಿಗೋಪುರವಾಗಿ ಕಡತ ಸೇರದಿರಲಿ.
5 ದಶಕಗಳ ಹೋರಾಟದ ಫಲವಾಗಿ ಧಾರವಾಡ ಮತ್ತು ಗುಲ್ಬರ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಿವೆ. ಧಾರವಾಡ ಪೀಠ ವ್ಯಾಪ್ತಿಯಲ್ಲಿರುವ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಗುಲ್ಬರ್ಗ ಪೀಠಕ್ಕೆ ಸೇರಿಸಬೇಕು ಎಂದು ಗುಲ್ಬರ್ಗ ವಕೀಲರು ವಾದಿಸುತ್ತಿದ್ದಾರೆ. ಎರಡೂ ಜಿಲ್ಲೆಗಳ ವಕೀಲರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು 'ಪೀಠ'ಕ್ಕಾಗಿ ಹೋರಾಟ ನಡೆದಿದೆ.
ಬದುಕು ಸುಂದರ ಗಾಜು ಇದ್ದಂತೆ. ಮಧುರ ಭಾವನೆ, ಪ್ರೀತಿ, ಕನಸುಗಳ ಸುಂದರ ಚಿತ್ತಾರಗಳನ್ನು ಗಾಜಿನ ಮೇಲೆ ಮೂಡಿಸಿದರೆ ಚಂದನೆಯ ಬದುಕು ನಿಮ್ಮದಾಗುತ್ತದೆ. ದಾರಿ ತಪ್ಪಿದರೆ ಗಾಜು ಒಡೆದೀತು. ನಿಮ್ಮ ಅಕ್ಕರೆಯ ಗಾಜನ್ನು ಜತನದಿಂದ ಕಾಪಾಡಿಕೊಳ್ಳಿ. ಆಲ್ ದಿ ಬೆಸ್ಟ್.