Hi ಕೋತಿ,
ಏನು ಕೋತಿ ಅಂದದ್ದಕ್ಕೆ ಬೇಜರಾಯಿತಾ. ಆದ್ರೂ ನೀನು ಕೋತಿನೇ ಕಣೋ. ನೀ ಮಾಡುವ ಚೇಷ್ಟೆ, ನಿನ್ನ ತುಂಟಾಟ ಯಾವ ಕೋತಿಗೂ ಕಡಿಮೆಯಿಲ್ಲ. ಅದಕ್ಕೆ ಕೋತಿ ಅಂದೆ. ಹೌದು ತಾನೆ. ಆದರೂ ನೀನಂದ್ರೆ ನಂಗೀಷ್ಟ ಕಣೋ.
ಸುಮ್ಮನೆ ಸುಮ್ಮನೆ
ಇದ್ದರೂ ಸುಮ್ಮನೆ
ಪ್ರಾಣ ತಿಂತಾನೇ
ನನ್ನ ಪ್ರೀತಿ ಗೆಲ್ತಾನೆ...
ಯಾಕೋ ಹೀಗೆ ಸತಾಯಿಸ್ತಿಯಾ. ನಿದ್ದೆ ಮಾಡಕ್ಕೂ ಬಿಡಲ್ಲ, ಊಟ ಮಾಡಕ್ಕೂ ಆಗಲ್ಲ, ನಿಜಕ್ಕೂ ಕೂರಕ್ಕೂ ಆಗಲ್ಲ. ಏನೋ ಮೋಡಿ ಮಾಡಿದೆ ನೀನು. ನನ್ನ ಪ್ರತಿಯೊಂದು ಕೆಲಸದಲ್ಲೂ ನಿನ್ನ ಕಾಣ್ತೀನಿ. ನೀನು ನನ್ನ ಕಣ್ಣ ಮುಂದೆ ನಗ್ತಾ ನಿಂತಿರ್ತಿಯ, ಕಣ್ಣು ಹೊಡಿತೀಯ, ಕಣ್ಣಲ್ಲೇ ಮುದ್ದಾಡ್ತಿಯಾ.
ನಿನ್ನ ನೆನಪು ಇಲ್ಲದ ದಿನಗಳೇ ಇಲ್ಲ ಕಣೋ. ನನ್ನ ಉಸಿರು ಯಾವತ್ತು ನಿಲ್ಲುತ್ತೋ ಅವತ್ತೇ ನಿನ್ನ ನೆನಪನ್ನು ನನ್ನ ಜೊತೆಯಲ್ಲಿ ನಿಲ್ಲಿಸ್ತೀನಿ. ನೀನಿಲ್ಲ ಅಂದ್ರೆ ನಾನಿಲ್ಲ ಕಣೋ.
ಯಾಕೊ ಬಂದೆ. ನಾನು ಹಾಯಾಗಿದ್ದೆ. ಸ್ವಚ್ಛಂದ ಬಾನಿನಲ್ಲಿ ಸ್ವತಂತ್ರವಾಗಿ ಹಾರಾಡೋ ಪುಟ್ಟ ಹಕ್ಕಿ ತರ. ನೀ ಪ್ರೀತಿಯ ಬಂಧನದಲ್ಲಿ ನನ್ನ ಬಂಧಿಸಿಬಿಟ್ಟೆ. ಆದ್ರೆ ಆ ಬಂಧನ ಇಷ್ಟೊಂದು ಸಂತೋಷ ಕೊಡುತ್ತೆ ಅಂತಾ ಅಂದ್ಕೊಂಡೆ ಇರಲಿಲ್ಲ. ನಿನ್ನ ಎದುರು ನಿಂತಾಗಲೆಲ್ಲ ನನ್ನ ಮೈಯೆಲ್ಲ ರೋಮಾಂಚನವಾದಂತಾಗುತ್ತೆ. ಕೈಯಲ್ಲಿ ನಡುಕ ಬಂದು ಹೇಳಬೇಕೆಂದಿದ್ದ ಮಾತುಗಳು ಉಡುಗಿಹೋಗುತ್ತೆ. ಏನೇನೋ ನೂರಾರು ಕನಸುಗಳು, ಹೇಳಲಾಗದ ಆಸೆಗಳು. ಏನು ಅಂತಾ ಹೇಳಲಾ...
ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ
ಗುಬ್ಬಿಯ ಹಾಗೆ ನಾ ಇರುವೆನು ನಿನ್ನಲಿ
ಅಪ್ಪಿಕೋ ನಿನ್ನಲಿ ನಿನ್ನೆದೆ ಚಿಪ್ಪಲಿ
ಸ್ವಾತಿಯ ಮುತ್ತಿನ ಹಾಗೆಯೇ ನಿನ್ನಲಿ...
ಎಂದೆಂದೂ ನೀ ನನ್ನ ಜೊತೆಯೇ ಇರ್ತಿಯಾ ಅಲ್ವ...
ಸಂಜೆಯ ಹೊತ್ತಲ್ಲಿ ಸಮುದ್ರದ ತೀರದಲ್ಲಿ ಸೂರ್ಯನ ಕಿರಣವು ಆಗಸವನ್ನು ಸುಂದರವಾದ ಬಣ್ಣಗಳಿಂದ ಕೆಂಪೇರಿಸುತ್ತೆ. ನೋಡು, ಆ ಸೌಂದರ್ಯವನ್ನು ನೋಡುತ್ತ ನಾನು ನೀನು ಮೈ ಮರೆಯಬೇಕು. ತಂಪಾದ ತಂಗಾಳಿಯನ್ನು ಸವಿಯುತ್ತಾ ನೀರಿನ ಅಲೆಗಳ ಮೇಲೆ ನೀನು ನಾನು ಜೊತೆ ಜೊತೆಯಲಿ ಹೆಜ್ಜೆ ಹಾಕಬೇಕು. ನಿನ್ನ ಎದೆ ಮೇಲೆ ನನ್ನ ಮುಖ ಇರಿಸಿ ಜಗತ್ತನ್ನೇ ನಾನು ಮರೀಬೇಕು. ನಿನ್ನ ಮಡಿಲಲ್ಲಿ ಮಲಗಿ ಸಣ್ಣ ಮಗುವಾಗಬೇಕು. ಇನ್ನೂ ಏನೇನೋ ಆಸೆ ಕಣೋ.
ನಾನು ನೀನು ಜೊತೆ ಸೇರಿ ನಮ್ಮದೇ ಆದ ಪ್ರೀತಿಯ ಗೂಡನ್ನು ಪುಟ್ಟದಾಗಿ ಕಟ್ಟಿ ಅಲ್ಲೇ ಸಂತೋಷವಾಗಿ ಕಳೆಯಬೇಕು. ನಿನ್ನ ನಾನು, ನನ್ನ ನೀನು ತುಂಬಾ ತುಂಬಾನೇ ಪ್ರೀತಿಸಬೇಕು. ಏನು, ಹುಚ್ಚಿ ತರ ಬರೀತಿದಾಳೆ ಅಂತ ಅಂದ್ಕೊತೀಯಾ. ಹೌದು ಕಣೋ ನಾನು ಹುಚ್ಚಿನೇ. ನಿನ್ನ ಪ್ರೀತಿಲಿ ನಾನು ಹುಚ್ಚಿ.
ಹೇಳು ನನ್ನ ಜೊತೆ ಇರ್ತಿಯಾ ಅಲ್ವ....
ನಿನ್ನವಳು
6 ಕಾಮೆಂಟ್‌ಗಳು:
... ಅಪ್ಪಿಕೋ ನಿನ್ನಲಿ ನಿನ್ನೆದೆ ಚಪ್ಪಲಿ ...
ಚಪ್ಪಲಿ ಅಲ್ರೀ ಅದು.. ಚಿಪ್ಪಲಿ
ದಯವಿಟ್ಟು ಕ್ಷಮಿಸಿ. ಯೂನಿಕೋಡ್ ಟೈಪ್ ಮಾಡೊ ಅವಸರದಲ್ಲಿ ತಪ್ಪಾಯ್ತು. ತಿದ್ದಿಕೊಳ್ಳಲು ಅವಕಾಶ ಕೊಡಿ.
ಸೊಗಲ ಕ್ಷೇತ್ರ ನಾನು ಬಹಳ ಇಷ್ಟ ಪಡುವ ಸ್ಥಳ. ನಿಮ್ಮ ಬರವಣಿಗೆಯ ಶೈಲಿ ಹಾಗೂ ನಿರೂಪಣೆಗಳು ಸೊಗಸಾಗಿವೆ.
ಏನ್ರೀ.. ಮೊದಲ ಲೇಖನವೇ ಓಳ್ಳೇ ರೊಮ್ಯಾಂಟಿಕ್ ಮೂಡಿನಲ್ಲಿ ಬರೆದಂತಿದೆ. ಚೆನ್ನಾಗಿದೆ. enjoy ಮಾಡಿ.
ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com
ಮತ್ತೊಂದು ಅಶ್ಚರ್ಯಕ್ಕೆ
http://camerahindhe.blogspot.com/
ಸಂಜೆಯ ಹೊತ್ತಲ್ಲಿ ಸಮುದ್ರದ ತೀರದಲ್ಲಿ ಸೂರ್ಯನ ಕಿರಣವು ಆಗಸವನ್ನು ಸುಂದರವಾದ ಬಣ್ಣಗಳಿಂದ ಕೆಂಪೇರಿಸುತ್ತೆ. ನೋಡು, ಆ ಸೌಂದರ್ಯವನ್ನು ನೋಡುತ್ತ ನಾನು ನೀನು ಮೈ ಮರೆಯಬೇಕು. ತಂಪಾದ ತಂಗಾಳಿಯನ್ನು ಸವಿಯುತ್ತಾ ನೀರಿನ ಅಲೆಗಳ ಮೇಲೆ ನೀನು ನಾನು ಜೊತೆ ಜೊತೆಯಲಿ ಹೆಜ್ಜೆ ಹಾಕಬೇಕು. ನಿನ್ನ ಎದೆ ಮೇಲೆ ನನ್ನ ಮುಖ ಇರಿಸಿ ಜಗತ್ತನ್ನೇ ನಾನು ಮರೀಬೇಕು. ನಿನ್ನ ಮಡಿಲಲ್ಲಿ ಮಲಗಿ ಸಣ್ಣ ಮಗುವಾಗಬೇಕು. ಇನ್ನೂ ಏನೇನೋ ಆಸೆ ಕಣೋ.
ಏನ್ ರೀ ಇಷ್ಟೋಂದು ರೋಮ್ಯಾಂಟಿಕ್ ಆಗ್ ಬಿಟ್ರಿ? ಮುದ್ ಮುದ್ದಾಗಿ ಬರಿತೀರಿ ನೀವು..:)
ನಿಮ್ಮ
ನವಿಲ್ಗರಿ
Hi...
Yenri Manju Istond Romantic Aagi bardidira!!
Neeve Bardidda Atva nim hudugi enadru bardiro letter na el hakidira hege?
Tumba Chennag baritira ri...
nim baravanige shaily nu chennagide..
ಕಾಮೆಂಟ್ ಪೋಸ್ಟ್ ಮಾಡಿ